    ಮೂಲದೊಡನೆ ಪರಿಶೀಲಿಸಿ

ಆವರ್ತಕೋಷ್ಟಕ
ರಾಸಾಯನಿಕ ದೃಷ್ಟಿಯಲ್ಲಿ ಗುಣಸಾಮ್ಯ ಕಂಡು ಬರುವ ಧಾತುಗಳು (ಎಲಿಮೆಂಟ್ಸ್) ಬೇರೆ ಬೇರೆಯಾಗಿ ಗುಂಪುಕೂಡಿಕೊಳ್ಳುವಂತೆ ರಾಸಾಯನಿಕ ಧಾತುಗಳೆಲ್ಲವನ್ನೂ ಕ್ರಮಬದ್ಧವಾಗಿ ಜೋಡಿಸಿ ತಯಾರಿಸಿರುವ ಕೋಷ್ಟಕ (ಪಿರಿಯಾಡಿಕ್ ಟೇಬಲ್). ರಷ್ಯ ದೇಶದ ರಸಾಯನ ವಿಜ್ಞಾನಿ ಡಿ.ಐ. ಮೆಂಡಿಲೀಫ್ (1834-1907) ಪ್ರತಿಪಾದಿಸಿದ ಆವರ್ತನಿಯಮ (ಪೀರಿಯಾಡಿಕ್ ಲಾ) ಇದಕ್ಕೆ ಆಧಾರ. ಆದ್ದರಿಂದ ಕೋಷ್ಟಕಕ್ಕೆ ಈ ಹೆಸರು. 

	ಧಾತುಗಳೆಲ್ಲವೂ ತಮ್ಮ ತಮ್ಮದೇ ಆದ ವಿಶಿಷ್ಟಗುಣಧರ್ಮಗಳನ್ನು ತೋರುವಂತೆಯೂ ಅವುಗಳಲ್ಲಿ ಒಂದಕ್ಕೊಂದು ಸಂಬಂಧವೇ ಇಲ್ಲದಂತೆಯೂ ಕಾಣುತ್ತಿದ್ದುದರಿಂದ ಅವುಗಳ ವರ್ಗೀಕರಣಕ್ಕೆ ಒಂದು ಆಧಾರವಿರಬಹುದೆಂಬುದೇ ಒಂದು ಹೊಸ ಭಾವನೆಯಾಗಿ ಕಾಣಿಸುತ್ತಿದ್ದ ಕಾಲ ಒಂದಿತ್ತು. ಆಗ ರಸಾಯನ ವಿಜ್ಞಾನವೆಂದರೆ ರಾಸಾಯನಿಕ ಧಾತುಗಳ ಮತ್ತು ಅವುಗಳ ಸಂಯುಕ್ತಗಳ ಗುಣಲಕ್ಷಣಗಳನ್ನು ಕುರಿತ ಮಾಹಿತಿಗಳ ಒಂದು ಅವ್ಯವಸ್ಥಿತ ಸಂಗ್ರಹವಾಗಿತ್ತು. ಅಂದು ತಿಳಿದಿದ್ದ ಧಾತುಗಳಲ್ಲಿ ಪರಸ್ಪರ ವಿಶೇಷ ಹೋಲಿಕೆಯಿರುವ ಮೂರು ಮೂರು ಧಾತುಗಳ ಗುಂಪುಗಳನ್ನು ಅಲ್ಲಲ್ಲಿ ಗುರುತಿಸಬಹುದೆಂದು ತೋರಿಸಿ, ಧಾತುಗಳ ವರ್ಗೀಕರಣ ಸಾಧ್ಯವಾದೀತೆಂಬ ಆಸೆಯನ್ನು 1829ರಲ್ಲಿ ಮೊತ್ತಮೊದಲು ಬಿತ್ತಿದವ ಜರ್ಮನಿಯ ಜೆ. ಡಬ್ಲ್ಯು. ಡೊಬೆರೈನರ್, ಕ್ಯಾಲ್ಸಿಯಂ-ಸ್ಟ್ರಾನ್ಷಿಯಂ-ಬೇರಿಯಂ, ಕ್ಲೋರಿನ್-ಬ್ರೋಮಿನ್-ಅಯೊಡಿನ್, ಸಲ್ಫರ್-ಸೆಲೀನಿಯಂ ಟೆಲೊರಿಯಂ-ಇವು ಅಂಥ ಕೆಲವು ತ್ರಿವಳಿಗಳು (ಟ್ರಯಡ್ಸ್). ಈ ಒಂದೊಂದು ತ್ರಿವಳಿಯಲ್ಲಿಯೂ ಪರಸ್ಪರ ರಾಸಾಯನಿಕ ಸಾಮ್ಯವಿರುವುದಲ್ಲದೆ ಮಧ್ಯದ ಧಾತುವಿನ ಪರಮಾಣುತೂಕ ಉಳಿದೆರಡರ ಪರಮಾಣುತೂಕಗಳ ಸರಾಸರಿಗೆ ಹೆಚ್ಚುಕಡಿಮೆ ಸಮನಾಗಿರುವುದೆಂದು ಆತ ತೋರಿಸಿದ. ರಾಸಾಯನಿಕ ಧಾತುಗಳೆಲ್ಲವನ್ನೂ ಇಂಥ ತ್ರಿವಳಿಗಳಾಗಿ ವಿಂಗಡಿಸಬಹುದೆಂಬ ಆತನ ನಿರೀಕ್ಷೆ ಸಫಲವಾಗಲಿಲ್ಲ. 

	ಅಲ್ಲಿಂದ ಮುಂದಿನ ಹೆಜ್ಜೆಯನ್ನಿಟ್ಟವ ಇಂಗ್ಲೆಂಡಿನ ವಿಜ್ಞಾನಿ ಜಾನ್ ಅಲೆಕ್ಸಾಂಡರ್ ನ್ಯೂಲೆಂಡ್ಸ್. 1864ರಲ್ಲಿ ನ್ಯೂಲೆಂಡ್ಸ್ ತನ್ನ ಅಷ್ಟಕನಿಯಮವನ್ನು (ಲಾ ಆಫ್ ಆಕ್ಟೇವ್ಸ್) ಪ್ರತಿಪಾದಿಸಿದ. ಆತನ ಪ್ರಕಾರ ಧಾತುಗಳೆಲ್ಲವನ್ನೂ ಅವುಗಳ ಪರಮಾಣು ತೂಕಗಳ ಆರೋಹಣಕ್ರಮದಲ್ಲಿ ಬರೆದರೆ, ಆ ಸಾಲಿನಲ್ಲಿ ಯಾವ ಧಾತುವಿನಿಂದ ಎಣಿಸಲು ಪ್ರಾರಂಭಿಸಿದರೂ ಅಲ್ಲಿಂದ ಎಂಟನೆಯ ಸ್ಥಾನದಲ್ಲಿ ಅದನ್ನು ಹೋಲುವ ಇನ್ನೊಂದು ಧಾತು ಇರುತ್ತದೆ-ಸಂಗೀತದ ಸ್ವರಶ್ರೇಣಿಯಲ್ಲಿ ಪ್ರತಿಯೊಂದು ಸ್ವರವೂ ಅಲ್ಲಿಂದ ಎಂಟನೆಯ ಸ್ಥಾನದಲ್ಲಿ ಪುನರಾವರ್ತಿಸುವಂತೆ. ಆಗ ಪರಿಚಿತವಾಗಿದ್ದ ಧಾತುಗಳಲ್ಲಿ ಮೊದಲ ಹದಿನೇಳು ಧಾತುಗಳನ್ನು ಆರೋಹಣ ಕ್ರಮದಲ್ಲಿ ಇಲ್ಲಿ ಬರೆದಿದೆ. ಈ ಸಾಲಿನಲ್ಲಿ ಅಷ್ಟಕನಿಯಮವನ್ನು ಕಾಣಬಹುದು. 

	 ಊ		 ಐi		 ಃe		ಃ	  ಅ	 ಓ	  ಔ
 (1.008)  (6.94)	  (9.01)	 (10.82) (12.01) (14.01) (16.06)

	ಈ		  ಓಚಿ		  ಒg		  ಂಟ	      Si	   P	       S	
 (19.00)	 (22.99)	 (24.32)	 (26.98)	 (28.09)	(30.97) (32.07)	

	 ಅಟ		  ಏ		   ಅಚಿ	
  (35.46)   (39.1)		(40.08)

	ಬೆರಿಲಿಯಂನಿಂದ ಎಂಟನೆಯ ಸ್ಥಾನದಲ್ಲಿ ಮೆಗ್ನೀಸಿಯಂ ಇದೆ; ಕಾರ್ಬನ್ನಿನಿಂದ ಎಂಟನೆಯ ಸ್ಥಾನದಲ್ಲಿ ಸಿಲಿಕನ್ ಇದೆ; ಪ್ಲೋರಿನ್ನಿನಿಂದ ಎಂಟನೆಯ ಸ್ಥಾನದಲ್ಲಿ ಕ್ಲೋರಿನ್ ಇದೆ. ಹೀಗೆ ಮುಂದುವರಿದರೆ ಮೊದಲ ಹದಿನೈದು ಇಪ್ಪತ್ತು ಧಾತುಗಳಾದ ಮೇಲೆ ಈ ನಿಯಮ ಮುರಿದು ಬೀಳುತ್ತದೆ. ಅಷ್ಟೇ ಅಲ್ಲ; ಆಗ ತಿಳಿಯದಿದ್ದ ಆದರೆ ಈಗ ತಿಳಿದಿರುವ ಜಡಾನಿಲಗಳಾದ ಹೀಲಿಯಂ, ನಿಯಾನ್ ಮೊದಲಾದುವನ್ನು ಅವುಗಳ ಪರಮಾಣುತೂಕಗಳ ಮೇರೆಗೆ ಈ ಸಾಲಿನಲ್ಲಿ ಸೂಕ್ತ ಸ್ಥಾನಗಳಲ್ಲಿ ಸೇರಿಸಿದರೆ ಗುಣಸಾಮ್ಯವಿರುವ ಧಾತು ಎಂಟನೆಯ ಸ್ಥಾನದಲ್ಲಿ ಪುನರಾವರ್ತಿಸುವುದರ ಬದಲು ಒಂಬತ್ತನೆಯ ಸ್ಥಾನದಲ್ಲಿ ಆಗುತ್ತದೆ. ಹೀಗೆ ಅಷ್ಟಕ ನಿಯಮ ಅಸಮರ್ಪಕವೆನಿಸಿತು. ಆದರೂ ಧಾತುಗಳ ಪರಮಾಣು ತೂಕ ಕ್ರಮದ ಸಾಲಿನಲ್ಲಿ ರಾಸಾಯನಿಕ ಗುಣಲಕ್ಷಣಗಳು ಆವರ್ತೀಯವಾಗಿ ಕಾಣಿಸಿಕೊಳ್ಳುವುದೆಂಬ ತತ್ತ್ವವನ್ನು ಸ್ಥೂಲವಾಗಿಯಾದರೂ ಮೊತ್ತಮೊದಲು ಗ್ರಹಿಸಿದನೆಂಬ ಕೀರ್ತಿ ನ್ಯೂಲೆಂಡ್ಸ್‍ಗೆ ಸಲ್ಲಲೇಬೇಕು.

	1869ರಲ್ಲಿ ಮೆಂಡಿಲೀಫ್ ತನ್ನ ಆವರ್ತನಿಯಮವನ್ನು ಪ್ರಕಟಿಸಿದ. ಧಾತುಗಳನ್ನು ಅವುಗಳ ಪರಮಾಣುತೂಕಕ್ರಮದಲ್ಲಿ ಸಾಲಾಗಿ ಬರೆದರೆ ಅಂಥ ಸಾಲಿನಲ್ಲಿ ರಾಸಾಯನಿಕ ಗುಣಸಾಮ್ಯವಿರುವ ಧಾತುಗಳು ಆವರ್ತೀಯವಾಗಿ ಪುನಃ ಪುನಃ ಕಾಣಿಸಿಕೊಳ್ಳುವುದೆಂದು ಮಾತ್ರ ನಿರೂಪಿಸಿದನೇ ವಿನಾ ಅಂಥ ಆವರ್ತಗಳ ಒಂದು ಅವಧಿಯಲ್ಲಿ ಇಷ್ಟೇ ಧಾತುಗಳಿರುವುವೆಂದು ಆತ ನಿಗದಿ ಮಾಡಲಿಲ್ಲ. ನ್ಯೂಲೆಂಡ್ಸ್‍ನ ನಿಯಮದ ಮೇಲೆ ಮೆಂಡಿಲೀಫ್ ಸಾಧಿಸಿದ ಸುಧಾರಣೆ ಇದೇ. 

 	ಸುಮಾರು ಇದೇ ಸಮಯದಲ್ಲಿ ಜರ್ಮನಿಯ ಲೋದರ್ ಮೇಯರ್ ಎಂಬಾತನು ಸ್ವತಂತ್ರವಾಗಿ ಆವರ್ತನಿಯಮವನ್ನು ಗುರುತಿಸಿ ಪ್ರಕಟಿಸಿದನಾದರೂ ಅದನ್ನು ವಿಶದೀಕರಿಸಲಿಲ್ಲ. ಮೆಂಡಿಲೀಫನಂತೆ ಆ ನಿಯಮದ ಆಧಾರದ ಮೇಲೆ ಒಂದು ಅಚ್ಚುಕಟ್ಟಾದ ಕೋಷ್ಟಕವನ್ನು ತಯಾರಿಸಲಿಲ್ಲ. ಆದ್ದರಿಂದ ಸಾಮಾನ್ಯವಾಗಿ ಆವರ್ತನಿಯಮವನ್ನು ಯಾವಾಗಲೂ ಮೆಂಡಿಲೀಫನ ಹೆಸರಿನೊಂದಿಗೆ ಸೇರಿಸುವುದು ವಾಡಿಕೆ. ಇದಕ್ಕೆ ಐದು ವರ್ಷ ಮುಂಚೆಯೇ ನ್ಯೂಲೆಂಡ್ಸ್ ಈ ನಿಯಮವನ್ನು ಅಸ್ಪಷ್ಟವಾಗಿ ಕಂಡುಕೊಂಡಿದ್ದನೆಂಬುದು ಮೆಂಡಿಲೀಫನಿಗಾಗಲೀ ಲೋದರ್ ಮೇಯರ್‍ನಿಗಾಗಲೀ ತಿಳಿದಿದ್ದಂತೆ ಕಾಣುವುದಿಲ್ಲ. ಅವರಿಬ್ಬರೂ ಸ್ವತಂತ್ರವಾಗಿಯೇ ಈ ನಿಯಮವನ್ನು ಗುರುತಿಸಿದಂತೆ ಕಾಣುತ್ತದೆ. 

	ಮೆಂಡಿಲೀಫ್ ತಾನು ಕಂಡುಹಿಡಿದ ಆವರ್ತನಿಯಮವನ್ನು ಮಾರ್ಗದರ್ಶಿಯಾಗಿಟ್ಟುಕೊಂಡು ಧಾತುಗಳ ವರ್ಗೀಕೃತ ಕೋಷ್ಟಕವೊಂದನ್ನು ತಯಾರಿಸಿದ. ಆಗ ಪರಿಚಯವಿದ್ದ ಧಾತುಗಳೆಲ್ಲವನ್ನೂ ಪರಮಾಣುತೂಕಗಳ ಆರೋಹಣಕ್ರಮದಲ್ಲಿ ಬರೆದು ಆ ಸಾಲಿನಲ್ಲಿ ಒಂದು ಧಾತುವಿನಿಂದ ಮುಂದೆ ಹೋಗುತ್ತ ಅದನ್ನು ಹೋಲುವ ಇನ್ನೊಂದು ಧಾತು ಸಿಗುವವರೆಗಿನ ಅವಧಿಯನ್ನು ಒಂದು ಆವರ್ತವೆಂದು ಕರೆದ ; ಹೀಗೆ ಆ ಧಾತುಗಳ ಸಾಲನ್ನು ಆವರ್ತಗಳಾಗಿ ಒಡೆದು ಅಂಥ ಆವರ್ತಗಳನ್ನು ಒಂದರ ಕೆಳಗೊಂದರಂತೆ ಇಟ್ಟು ಗುಣಸಾಮ್ಯವಿರುವ ಧಾತುಗಳು ಬೇರೆ ಬೇರೆ ನೀಟಸಾಲುಗಳಲ್ಲಿ (ಕಾಲಮ್ಸ್) ಬೀಳುವಂತೆ ಅಳವಡಿಸಿ ಕೋಷ್ಟಕವನ್ನು ರಚಿಸಿದ. ಅಲ್ಲಿಂದೀಚೆಗೆ ಕಂಡುಹಿಡಿದ ಧಾತುಗಳನ್ನೂ ಆತನ ಆವರ್ತಕೋಷ್ಟಕದಲ್ಲಿ ಸೂಕ್ತಸ್ಥಾನಗಳಿಗೆ ಸೇರಿಸಿದಾಗ ಅದರ ಮಾದರಿ ಹೇಗಿರುವುದೆಂಬುದನ್ನು ಚಿತ್ರ 2ರಲ್ಲಿ ತೋರಿಸಿದೆ. 

	ಈ ಕೋಷ್ಟಕದ ನೀಟಸಾಲುಗಳನ್ನು ಗುಂಪುಗಳೆಂದೂ (ಗ್ರೂಪ್ಸ್) ಅಡ್ಡಸಾಲುಗಳನ್ನು (ರೋಸ್) ಆವರ್ತಗಳೆಂದೂ (ಪೀರಿಯಡ್ಸ್) ಕರೆಯಲಾಗಿದೆ. ಬಲತುದಿಯಲ್ಲಿರುವ 0 (ಸೊನ್ನೆ) ಗುಂಪಿನಲ್ಲಿರುವ ಜಡಾನಿಲಗಳು ಆಗ ತಿಳಿದಿರಲಿಲ್ಲ. ಅವನ್ನು ಸದ್ಯಕ್ಕೆ ಕೈಬಿಟ್ಟು ಮೆಂಡಿಲೀಫನ ಆಲೋಚನಾಸರಣಿಯನ್ನು ಪರಿಶೀಲಿಸಬಹುದು. ಮೊತ್ತಮೊದಲನೆಯ ಧಾತುವಾದ ಹೈಡ್ರೋಜನ್ (ಊ) ಆದಕೊಡಲೇ ಅದನ್ನು ತಕ್ಕಮಟ್ಟಿಗೆ ಹೋಲುವ ಲಿಥಿಯಂ (ಐi) ಬಂದದ್ದರಿಂದ ಒಂದನೇ ಆವರ್ತದಲ್ಲಿ ಹೈಡ್ರೋಜನ್ ಒಂದೇ ಧಾತುವಾಯಿತು. ಎರಡನೆಯ ಮತ್ತು ಮೂರನೆಯ ಆವರ್ತಗಳಲ್ಲಿ ಏಳೇಳು ಧಾತುಗಳು ಮಾತ್ರ ಇದ್ದುದರಿಂದ ಅವನ್ನು ಹ್ರಸ್ವ ಆವರ್ತಗಳೆಂದು (ಷಾರ್ಟ್ ಪೀರಿಯಡ್ಸ್) ಕರೆಯಲಾಯಿತು. ಈ ಎರಡೂ ಆವರ್ತಗಳನ್ನು ಒಂದರ ಕೆಳಗೊಂದು ಜೋಡಿಸಿದಾಗ ಏಳು ನೀಟಸಾಲುಗಳು ಅಥವಾ ಏಳು ಗುಂಪುಗಳು ರೂಪುಗೊಂಡುವು. ಈ ಒಂದೊಂದು ಗುಂಪಿನಲ್ಲಿಯೂ ಎರಡೆರಡು ಧಾತುಗಳು ಬಿದ್ದುವು. ಅಲ್ಲಿಗೆ ಕೋಷ್ಟಕದಲ್ಲಿ ಎರಡನೆಯ ಮತ್ತು ಮೂರನೆಯ ಆವರ್ತಗಳು ಪೂರ್ಣಗೊಂಡುವು. ಅಲ್ಲಿಂದ ಮುಂದೆ ಪೊಟ್ಯಾಸಿಯಂನಿಂದ (ಸಂಕೇತ ಏ) ಪ್ರಾರಂಭವಾದ ನಾಲ್ಕನೆಯ ಆವರ್ತ ದೀರ್ಘ ಆವರ್ತ (ಲಾಂಗ್ ಪೀರಿಯಡ್) ಆಗಬೇಕಾಯಿತು. ಏಕೆಂದರೆ ಪುನಃ ಪೊಟ್ಯಾಸಿಯಂ ಅನ್ನು ಹೋಲುವ ರುಬಿಡಿಯಂ (ಸಂಕೇತ ಖb) ತಲುಪಲು ಹದಿನೇಳು ಧಾತುಗಳನ್ನು ನೀಟಸಾಲುಗಳಾದ ಏಳು ಗುಂಪುಗಳೊಳಕ್ಕೆ ಸೇರಿಸಲು ಮೆಂಡಿಲೀಫ್ ಒಂದು ಹೊಸ ಉಪಾಯವನ್ನು ಹೂಡಬೇಕಾಯಿತು. ಏಳು ಗುಂಪುಗಳಲ್ಲಿ ಒಂದೊಂದನ್ನು ಅಲ್ಲಿಂದ ಮುಂದೆ ಚಿ ಮತ್ತು b ಉಪಗುಂಪುಗಳೆಂಬ (ಸಬ್‍ಗ್ರೂಪ್ಸ್) ಎರಡೆರಡು ಶಾಖೆಗಳಾಗಿ ಒಡೆದು ಈ ದೀರ್ಘ ಆವರ್ತದಲ್ಲಿ ಬರುವ ಮೊದಲ ಏಳು ಧಾತುಗಳನ್ನು ಆಯಾ ಗುಂಪಿನ ಚಿ ಶಾಖೆಗಳಿಗೂ ಕೊನೆಯ ಏಳು ಧಾತುಗಳನ್ನು ಆಯಾ ಗುಂಪಿನ b ಶಾಖೆಗಳಿಗೂ ಸೇರಿಸಿದ. ಚಿ ಉಪಗುಂಪುಗಳಿಗೆ ಬೀಳುವ ಧಾತುಗಳನ್ನು ಆವರ್ತದ ಚಿ ಶ್ರೇಣಿಯೆಂದೂ (ಚಿ ಸೀರೀಸ್) b ಉಪಗುಂಪುಗಳಿಗೆ ಬೀಳುವ ಧಾತುಗಳನ್ನು ಆವರ್ತದ ಅದೇ ಆವರ್ತದ b ಶ್ರೇಣಿಯೆಂದೂ ಕರೆಯಲಾಯಿತು. ಚಿ ಶ್ರೇಣಿಯ ಏಳು ಧಾತುಗಳಾದ ತರುವಾಯ b ಶ್ರೇಣಿಯ ಏಳು ಧಾತುಗಳು ಪ್ರಾರಂಭವಾಗುವುದಕ್ಕೆ ಮುಂಚೆ ಬರುವ ಮಧ್ಯದ ಮೂರು ಧಾತುಗಳನ್ನು ಸಂಕ್ರಮಣ ಧಾತುಗಳೆಂದು (ಟ್ರಾನ್ಸಿಷನ್ ಎಲಿಮೆಂಟ್ಸ್) ಕರೆದು ಅವನ್ನು ಬೇರೊಂದು ಗುಂಪಿಗೆ ಹಾಕಿ ಆ ಗುಂಪನ್ನು ಎಂಟನೆಯ ಗುಂಪೆಂದು ಕರೆಯಲಾಯಿತು. ಅಲ್ಲಿಂದ ಮುಂದಿನದಾದ ಐದನೆಯ ಆವರ್ತವೂ ದೀರ್ಘವಾಗಿದ್ದು ಅದರಲ್ಲಿಯೂ ಇದೇ ಪರಿಸ್ಥಿತಿ ಕಂಡುಬಂದುದರಿಂದ ಅದನ್ನೂ ನಾಲ್ಕನೆಯ ಆವರ್ತದಂತೆಯೇ ರಚಿಸಲಾಯಿತು. ಆದರೆ ಆರನೆಯ ಆವರ್ತದಲ್ಲಿ ಮೆಂಡಿಲೀಫ್ ಹೊಸ ಸಮಸ್ಯೆಯೊಂದನ್ನು ಎದುರಿಸಬೇಕಾಯಿತು. ಈ ಆವರ್ತದ ಮೊದಲ ಎರಡು ಧಾತುಗಳಾದ ಸೀಸಿಯಂ (ಸಂಕೇತ ಅss) ಮತ್ತು ಬೇರಿಯಂಗಳು (ಸಂಕೇತ ಃಚಿ) ಎಂದಿನಂತೆ 1(ಚಿ) ಮತ್ತು 2 (b) ಉಪಗುಂಪುಗಳನ್ನು ಸೇರಿದುವು. ಸೀಸಿಯಂ ಅದೇ ಉಪಗುಂಪಿನಲ್ಲಿ ಮೇಲುಗಡೆ ಇರುವ ಪೊಟ್ಯಾಸಿಯಂ ಮತ್ತು ರುಬಿಡಿಯಮನ್ನೂ ಹಾಗೆಯೇ ಬೇರಿಯಂ ಅದರ ಮೇಲುಗಡೆ ಇರುವ ಕ್ಯಾಲ್ಸಿಯಂ (ಅಚಿ) ಮತ್ತು ಸ್ಟ್ರಾನ್ಷಿಯಮನ್ನೂ (Sಡಿ) ಹೋಲುವುದರಿಂದ ಅವುಗಳಿಗೆ ದೊರೆತ ಸ್ಥಾನಗಳು ಸಮರ್ಪಕವಾಗಿದ್ದುವು. ಅವುಗಳಾದ ಮೇಲೆ ಬರುವ ಲ್ಯಾಂಥನಂ (ಐಚಿ) ಸಹ 3(ಚಿ) ಉಪಗುಂಪಿಗೆ ಹೊಂದಿಕೊಂಡಿತು. ಆದರೆ ಅಲ್ಲಿಂದ ಮುಂದೆ ಪರಮಾಣು ತೂಕ ಕ್ರಮದಲ್ಲಿ ಬರುವ ಹದಿನಾಲ್ಕು ಧಾತುಗಳೂ ಲ್ಯಾಂಥನಮನ್ನು ಅತ್ಯಂತ ನಿಕಟವಾಗಿ ಹೋಲುವುದರಿಂದ ಅವನ್ನು ಕ್ರಮವಾಗಿ ಮುಂದಿನ ಸ್ಥಾನಗಳಿಗೆ ಇಡುತ್ತ ಮುಂದುವರಿಯುವಂತಿರಲಿಲ್ಲ. ವಿರಳಭಸ್ಮಧಾತುಗಳು (ರೇರ್ ಅರ್ತ್ ಎಲಿಮೆಂಟ್ಸ್) ಎಂದು ಕರೆಸಿಕೊಳ್ಳುವ ಈ ಹದಿನೈದು ಧಾತುಗಳ ತರುವಾಯ ಬರುವ ಹಾಫ್ನಿಯಂ (ಊಜಿ) ಆದರೆ 4(ಚಿ) ಉಪಗುಂಪಿನಲ್ಲಿರುವ ಟೈಟೇನಿಯಂ (ಖಿi) ಮತ್ತು ಸಿರ್ಕೋನಿಯಂಗಳೊಂದಿಗೆ (Zಡಿ) ಚೆನ್ನಾಗಿ ಹೊಂದಿಕೊಂಡಿತು. ಮೆಂಡಿಲೀಫ್ ಧೈರ್ಯವಾಗಿ ಹದಿನೈದು ವಿರಳಭಸ್ಮಧಾತುಗಳನ್ನೂ ಒಟ್ಟುಗೂಡಿಸಿ ಲ್ಯಾಂಥನಂ ಸ್ಥಾನದಲ್ಲಿಟ್ಟು ಆರನೆಯ ಆವರ್ತದ ರಚನೆಯನ್ನು ಮುಂದುವರಿಸಿಕೊಂಡು ಹೋದ. ಆಗ ಆ ಆವರ್ತವೂ ಹಿಂದಿನ ಎರಡು ದೀರ್ಘ ಆವರ್ತಗಳಂತೆಯೇ ರೂಪುಗೊಂಡಿತು. ಕೊನೆಯದಾದ ಏಳನೆಯ ಆವರ್ತ ಹಿಂದಿನ ಮೂರು ಆವರ್ತಗಳಂತೆಯೇ ಪ್ರಾರಂಭಿಸಿ ಅದರಲ್ಲಿನ ಆರನೆಯ ಧಾತುವಾದ ಯೂರೇನಿಯಂ ಅನಂತರ ನಿಂತುಹೋಯಿತು. ಏಕೆಂದರೆ ಆಗ ತಿಳಿದಿದ್ದ ಧಾತುಗಳಲ್ಲಿ ಅತ್ಯಧಿಕ ಪರಮಾಣುತೂಕದ ಧಾತುವೆಂದರೆ ಯುರೇನಿಯಂ. 

	ಮೆಂಡಿಲೀಫನ ಜೀವಿತಕಾಲದಲ್ಲೇ ಕಂಡುಹಿಡಿಯಲಾದ ಜಡಾನಿಲಗಳಾದ ಹೀಲಿಯಂ (ಊe), ನಿಯಾನ್ (ಓe), ಆರ್ಗಾನ್ (ಂ) ಮೊದಲಾದವುಗಳ ಪರಮಾಣುತೂಕಗಳನ್ನು ಪರಿಶೀಲಿಸಲಾಗಿ ಅವು ಒಂದೊಂದೂ ಒಂದೊಂದು ಆವರ್ತದ ಕೊನೆಯಲ್ಲಿ ಬಂದು ನಿಂತುವು. ಮೊದಲನೆಯ ಆವರ್ತದಲ್ಲಿ ಹೈಡ್ರೋಜನ್ ಆದ ಅನಂತರ ಹೀಲಿಯಂ, ಎರಡು ಮತ್ತು ಮೂರನೆಯ ಹ್ರಸ್ವ ಆವರ್ತಗಳಲ್ಲಿ ಎಂಟನೆಯ ಧಾತುಗಳಾಗಿ ನಿಯಾನ್ ಮತ್ತು ಆರ್ಗಾನ್ ಮುಂದಿನ ದೀರ್ಘ ಆವರ್ತಗಳಲ್ಲಿ ಒಂದೊಂದರಲ್ಲಿಯೂ ಹದಿನೆಂಟನೆಯ ಧಾತುಗಳಾಗಿ ಉಳಿದ ಜಡಾನಿಲಗಳೂ ಬಂದುವು. ಎಂಟನೆಯ ಗುಂಪಿನ ಸಂಕ್ರಮಣ ಧಾತುಗಳು ದೀರ್ಘ ಆವರ್ತಗಳ ಶ್ರೇಣಿಗಳಾದ ಅನಂತರ ಬರುವಂತೆಯೇ ಜಡಾನಿಲಗಳು b ಶ್ರೇಣಿಗಳಾದ ಅನಂತರ ಬರುವುದರಿಂದ ಅದನ್ನು 8(b) ಎಂಬ ಹೊಸ ಉಪಗುಂಪಿಗೆ ಸೇರಿಸಬಹುದು ಎಂಬಂತೆ ಕಾಣುವುದಾದರೂ ಆ ಏರ್ಪಾಡು ಸಮರ್ಪಕವಲ್ಲವೆಂಬುದನ್ನು ಸುಲಭವಾಗಿ ಮನಗಾಣಬಹುದು. ಏಕೆಂದರೆ ಹ್ರಸ್ವ ಆವರ್ತಗಳ ಕೊನೆಯಲ್ಲಿಯೂ ಜಡಾನಿಲಗಳಿವೆ. ಆದ್ದರಿಂದ ಅವನ್ನು ಬೇರೊಂದು ನೀಟಸಾಲಿಗೆ ಸೇರಿಸಿ ಅದನ್ನು ಸೊನ್ನೆ ಗುಂಪು (0 ಗ್ರೂಪ್) ಎಂದು ಕರೆಯಲಾಯಿತು. ಮೊದಲ ಏಳು ಗುಂಪುಗಳಲ್ಲಿ ಗುಂಪಿನ ಸಂಖ್ಯೆ ಬಲುಮಟ್ಟಿಗೆ ಆ ಗುಂಪಿಗೆ ಸೇರಿದ ಧಾತುಗಳ ವೇಲೆನ್ಸಿ 0 ಸೂಚಿಸುವುದು. ಏಕೆಂದರೆ ಈ ಧಾತುಗಳಿಗೆ ರಾಸಾಯನಿಕ ಪಟುತ್ವವೇ ಇಲ್ಲ. ಅಷ್ಟೇ ಅಲ್ಲದೆ ಪ್ರತಿಯೊಂದು ಆವರ್ತದ ಕೊನೆಯಲ್ಲಿ ಬರುವ ಜಡಾನಿಲವನ್ನೂ ಬೇಕೆನಿಸಿದರೆ ಮುಂದಿನ ಆವರ್ತದ ಪ್ರಾರಂಭದಲ್ಲಿ ಹಾಕಿ ಸೊನ್ನೆಗುಂಪು ಒಂದನೆಯ ಗುಂಪಿಗೆ ಮುಂಚೆ ಬರುವಂತೆ ಮಾಡುವ ಸಾಧ್ಯತೆ ಇದೆ. ಈ ಕಾರಣಗಳಿಂದ ಈ ಏರ್ಪಾಡು ಸಮರ್ಪಕವೆನಿಸಿದೆ. 

	ಮೆಂಡಿಲೀಫ್ ಹೀಗೆ ತಯಾರಿಸಿದ ಆವರ್ತಕೋಷ್ಟಕದಲ್ಲಿ ಗುಣಸಾಮ್ಯವಿರುವ ಧಾತುಗಳು ಬೇರೆ ಬೇರೆಯಾಗಿ ಗುಂಪುಗೂಡಿಕೊಂಡಿರುವುದನ್ನು ನೋಡಬಹುದು. ಮೊದಲ ಎರಡು ಗುಂಪುಗಳಲ್ಲಿ ಹ್ರಸ್ವ ಆವರ್ತಗಳಿಗೆ ಸೇರಿದ ಅಗ್ರಧಾತುಗಳೆರಡೂ (ಟಪಿಕಲ್ ಆರ್ ಹೆಡ್ ಎಲಿಮೆಂಟ್ಸ್ : ಲಿಥಿಯಂ, ಸೋಡಿಯಂ ಮತ್ತು ಬೆರೆಲಿಯಂ, ಮೆಗ್ನೀಸಿಯಂ) ಆಯಾ ಗುಂಪಿನಲ್ಲಿರುವ ಚಿ ಉಪಗುಂಪಿನ ಧಾತುಗಳನ್ನು ಹೋಲುತ್ತದೆ. ಈ ಎರಡು ಗುಂಪುಗಳ ಉಪಗುಂಪುಗಳಲ್ಲಿರುವ ಮೂರು ಮೂರು ಧಾತುಗಳು ತಮ್ಮ ತಮ್ಮಲ್ಲೇ ಪರಸ್ಪರ ಹೋಲಿಕೆ ತೋರುವ ಚಿಕ್ಕ ಕುಟುಂಬಗಳಾಗಿ ರೂಪುಗೊಂಡಿವೆ. ಅಂತೆಯೇ ಮೂರರಿಂದ ಏಳರವರೆಗಿನ ಐದು ಗುಂಪುಗಳಲ್ಲಿ ಅಗ್ರಧಾತುಗಳು b ಉಪಗುಂಪಿನ ಧಾತುಗಳನ್ನು ಹೋಲುತ್ತವೆ. ಈ ಐದು ಗುಂಪುಗಳ ಚಿ ಉಪಗುಂಪುಗಳಲ್ಲಿರುವ ಧಾತುಗಳು ಅದೇ ರೀತಿ ಪರಸ್ಪರ ಹೋಲಿಕೆಯಿರುವ ಚಿಕ್ಕ ಕುಟುಂಬಗಳಾಗಿವೆ.

	ಆವರ್ತಕೋಷ್ಟಕದಲ್ಲಿ ರಾಸಾಯನಿಕ ಧಾತುಗಳೆಲ್ಲವನ್ನೂ ಇಷ್ಟು ಅಚ್ಚುಕಟ್ಟಾಗಿ ವರ್ಗೀಕರಿಸಿದ್ದಲ್ಲದೆ ಆ ಕಾಲಕ್ಕೆ ಇನ್ನೂ ಕಂಡುಹಿಡಿಯದಿದ್ದ ಧಾತುಗಳ ಸ್ಥಾನಗಳನ್ನು ನಿರ್ದೇಶಿಸಿ ಹಾಗೆ ತೆರಪು ಬಿಟ್ಟ ಸ್ಥಾನಗಳನ್ನು ತುಂಬುವಂಥ ಧಾತುಗಳು ಮುಂದೆ ಪತ್ತೆಯಾಗುವುದೆಂದು ಭವಿಷ್ಯ ನುಡಿಯಲೂ ಮೆಂಡಿಲೀಫನಿಗೆ ಸಾಧ್ಯವಾಯಿತು. ಉದಾಹರಣೆಗೆ ಮೊದಲನೆಯ ದೀರ್ಘ ಆವರ್ತದ b ಶ್ರೇಣಿಯಲ್ಲಿ ತಾಮ್ರ (ಅu, ಪರಮಾಣುತೂಕ 63.54) ಮತ್ತು ಸತುಗಳನ್ನು (Zಟಿ, ಪರಮಾಣು ತೂಕ 65.38) 1(b) ಮತ್ತು 2(b) ಉಪಗುಂಪುಗಳಲ್ಲಿಟ್ಟ ತರುವಾಯ ಪರಮಾಣುತೂಕ ಕ್ರಮದಲ್ಲಿ ಬಂದುದು ಆರ್ಸೆನಿಕ್ (ಂs, ಪರಮಾಣುತೂಕ 74.91) ಆದರೆ ಆರ್ಸೆನಿಕ್ ಗುಣಲಕ್ಷಣಗಳಲ್ಲಿ, ಐದನೆಯ ಗುಂಪಿನ ನೈಟ್ರೊಜನ್ (ಓ) ಫಾಸ್ಫರಸ್‍ಗಳನ್ನು (P) ನಿಕಟವಾಗಿ ಹೋಲುವುದನ್ನು ಗಮನಿಸಿದ ಮೆಂಡಿಲೀಫ್ ಧೈರ್ಯವಾಗಿ ಆರ್ಸೆನಿಕನ್ನು 5(b) ಉಪಗುಂಪಿನಲ್ಲಿರಿಸಿ 3(b) ಯಲ್ಲಿ (ಅಂದರೆ ಅಲ್ಯೂಮಿನಿಯಂ ಕೆಳಗೆ) ಒಂದು ಸ್ಥಾನವನ್ನೂ 4(b) ಯಲ್ಲಿ (ಅಂದರೆ ಸಿಲಿಕನ್ ಕೆಳಗೆ) ಒಂದು ಸ್ಥಾನವನ್ನು ಖಾಲಿಯಾಗಿ ಬಿಟ್ಟುಬಿಟ್ಟ. ಆ ಖಾಲಿ ಸ್ಥಾನಗಳಿಗೆ ಹೊಂದಿಕೊಳ್ಳುವ ಎರಡು ಧಾತುಗಳನ್ನು ಮುಂದೆ ಕಂಡುಹಿಡಿಯಲಾಗುವುದೆಂದು ಭವಿಷ್ಯ ನುಡಿದನಲ್ಲದೆ ಅವುಗಳ ಗುಣಲಕ್ಷಣಗಳ ಬಗ್ಗೆ ಮುನ್ಸೂಚನೆ ಕೊಟ್ಟ. ಅಲ್ಲಿಂದೀಚೆಗೆ ಕಂಡುಹಿಡಿಯಲಾದ ಗ್ಯಾಲಿಯಂ (ಉಚಿ, ಪರಮಾಣುತೂಕ 96.72) ಮತು ಜರ್ಮೇನಿಯಂ (ಉe, ಪರಮಾಣುತೂಕ 72.6) ಆ ಸ್ಥಾನಗಳನ್ನು ತುಂಬಿದುವು. ಹೀಗೆ ಆತ ಭವಿಷ್ಯ ನುಡಿದ ಇನ್ನೂ ಹಲವಾರು ಧಾತುಗಳು ತರುವಾಯ ಪತ್ತೆಯಾಗಿವೆ. 

	ಮೆಂಡಿಲೀಫನ ಕೋಷ್ಟಕ ಇಷ್ಟು ಯಶಸ್ವಿಯಾದರೂ ಅದರ ಬಗ್ಗೆ ಕೆಲವು ಆಕ್ಷೇಪಣೆಗಳಿದ್ದುವು. ಹದಿನೈದು ವಿರಳಭಸ್ಮಧಾತುಗಳನ್ನು ಒಂದೇ ಧಾತುವಿನ ಸ್ಥಾನದಲ್ಲಿರಿಸಿದುದು ಅಂಥ ಆಕ್ಷೇಪಣೆಗಳಲ್ಲೊಂದು. ಅಲ್ಲದೆ ಕೆಲವು ಸಂದರ್ಭಗಳಲ್ಲಿ ಪರಸ್ಪರ ಹೋಲಿಕೆಯಿರುವ ಧಾತುಗಳನ್ನು ಒಂದೇ ನೀಟಸಾಲಿನಲ್ಲಿ ತರುವ ಉದ್ದೇಶದಿಂದ ಕೋಷ್ಟಕಕ್ಕೆ ಆಧಾರವಾಗಿದ್ದ ಪರಮಾಣುತೂಕಗಳ ಆರೋಹಣ ಕ್ರಮವನ್ನೇ ಆತ ನಿರ್ಲಕ್ಷಿಸಿದ್ದುಂಟು. ಉದಾಹರಣೆಗೆ ಎರಡನೆಯ ದೀರ್ಘ ಆವರ್ತದ b ಶ್ರೇಣಿಯ ಕೊನೆಯಲ್ಲಿರುವ ಅಯೊಡೀನ್ (I) ಪರಮಾಣುತೂಕ (126.9) ಟೆಲೊರಿಯಂನ (ಖಿe) ಪರಮಾಣುತೂಕಕ್ಕಿಂತ (127.6) ಕಡಿಮೆ ಇದೆಯಾದರೊ ಟೆಲೊರಿಯಂ ಅನ್ನು 6 (b) ಯಲ್ಲಿ ಸೆಲೀನಿಯಂನೊಡನೆ (Se) ಹೊಂದಿಕೊಳ್ಳುವಂತೆಯೂ ಅಯೊಡೀನನ್ನು 7(b) ಯಲ್ಲಿ ಬ್ರೊಮಿನ್ನಿನೊಡನೆ (ಃಡಿ) ಹೊಂದಿಕೊಳ್ಳುವಂತೆಯೂ ಸೇರಿಸುವ ಧೈರ್ಯಮಾಡಿದ. 

	  ಇಪ್ಪತ್ತನೆಯ ಶತಮಾನದ ಮೊದಲೆರಡು ದಶಕಗಳಲ್ಲಿ ಪರಮಾಣುರಚನೆಯನ್ನು ಕುರಿತ ಜ್ಞಾನ (ನೋಡಿ- ಪರಮಾಣು)  ನಮಗೆ ಒದಗಿದಮೇಲೆ ಆವರ್ತ ಕೋಷ್ಟಕದ ಮೇಲೆ ಹೊಸಬೆಳಕು ಚೆಲ್ಲಿದಂತಾಯಿತು. ಮೊದಲನೆಯದಾಗಿ ಧಾತುಗಳ ವರ್ಗೀಕರಣಕ್ಕೆ ಪರಮಾಣುತೂಕಕ್ಕಿಂತ ಮೂಲತಃವಾದುದು ಧಾತುಗಳ ಪರಮಾಣು ಸಂಖ್ಯೆ (ಆಟಾಮಿಕ್ ನಂಬರ್) ಎನ್ನುವುದು ಖಚಿತವಾಯಿತು. ಯಾವುದೇ ಧಾತುವಿನ ರಾಸಾಯನಿಕ ಸ್ವಭಾವವನ್ನು ನಿರ್ಧರಿಸುವುದು ಅದರ ಪರಮಾಣು ಸಂಖ್ಯೆ-ಪರಮಾಣುವಿನ ಬೀಜದಲ್ಲಿರುವ (ನ್ಯೂಕ್ಲಿಯಸ್ ಮೇಲಿರುವ) ವಿದ್ಯುದಂಶ. ಆದ್ದರಿಂದ ಆವರ್ತಕೋಷ್ಟಕದಲ್ಲಿ ಧಾತುಗಳಿರಬೇಕಾದುದು ಪರಮಾಣು ಸಂಖ್ಯೆಗಳ ಆರೋಹಣ ಕ್ರಮದಲ್ಲೇ ವಿನಾಪರಮಾಣುತೂಕಗಳ ಕ್ರಮದಲ್ಲಲ್ಲ. ಆಗ ಆವರ್ತಕೋಷ್ಟಕದಲ್ಲಿ ಧಾತುವಿನ ಕ್ರಮಸಂಖ್ಯೆಯೇ ಪರಮಾಣುಸಂಖ್ಯೆಯಾಗುತ್ತದೆ. ಈ ದೃಷ್ಟಿಯಲ್ಲಿ ನೋಡಿದಾಗ ಕೆಲವು ಸಂದರ್ಭಗಳಲ್ಲಿ ಪರಮಾಣುತೂಕಕ್ರಮವನ್ನು ಉಲ್ಲಂಘಿಸಿರುವುದು ಅಪರಾಧವೇನಲ್ಲ. ಉದಾಹರಣೆಗೆ ಟೆಲೊರಿಯಂ ಅಯೊಡೀನ್‍ಗಳಲ್ಲಿ ಅವುಗಳ ಐಸೊಟೋಪು ಸಂಯೋಜನೆಯ ಕಾರಣ ಟೆಲೊರಿಯಂ ಪರಮಾಣು ತೂಕ ಹೆಚ್ಚಾಗಿರುವುದಾದರೂ ಅದರ ಪರಮಾಣು ಸಂಖ್ಯೆ (52) ಅಯಾಡೀನ್ ಪರಮಾಣುಸಂಖ್ಯೆಗಿಂತ (53) ಒಂದು ಕಡಿಮೆ. ಆದ್ದರಿಂದ ಟೆಲೊರಿಯಂ ಮೊದಲು ಬಂದುದು ಸಾಧುವೇ ಆಗಿದೆ. 

	ಅದಕ್ಕೂ ಮಿಗಿಲಾಗಿ ಧಾತುಗಳ ಪರಮಾಣುಸಂಖ್ಯಾಕ್ರಮದಲ್ಲಿ ರಾಸಾಯನಿಕ ಗುಣಲಕ್ಷಣಗಳು ಆವರ್ತೀಯವಾಗಿ ಕಾಣಿಸಿಕೊಳ್ಳಲು ಒಂದು ಕಾರಣ ಸಹ ಗೊತ್ತಾದಂತಾಯಿತು. ಪರಮಾಣುಗಳ ಹೊರವಲಯಗಳಲ್ಲಿನ ಎಲೆಕ್ಟ್ರಾನ್ ವಿನ್ಯಾಸಗಳೇ (ಎಲೆಕ್ಟ್ರಾನಿಕ್ ಕನ್ ಫಿಗುರೇಷನ್ಸ್ ) ಆವರ್ತಕೋಷ್ಟಕಕ್ಕೆ ಬೀಗದ ಕೈ. ಪರಮಾಣು ಬೀಜದ ಸುತ್ತ ಇರುವ ಮೊದಲನೆಯ ಏ ಚಿಪ್ಪಿನಲ್ಲಿ (ಏ ಶೆಲ್) ಎರಡು ಎಲೆಕ್ಟ್ರಾನ್‍ಗಳು ಒಂದಾದಮೇಲೊಂದರಂತೆ ತುಂಬಿಕೊಂಡಾಗ ಉಂಟಾದ ಹೈಡ್ರೊಜನ್ ಮತ್ತು ಹೀಲಿಯಂಗಳು ಆವರ್ತಕೋಷ್ಟಕದ ಒಂದನೆಯ ಆವರ್ತವನ್ನು ರೂಪಿಸುತ್ತವೆ. ಐ ಮತ್ತು ಒ ಚಿಪ್ಪುಗಳಲ್ಲಿ ಎಂಟೆಂಟು ಎಲೆಕ್ಟ್ರಾನ್‍ಗಳು ತುಂಬಿಕೊಂಡುದರಿಂದ ಮೊದಲ ಎರಡು ಹ್ರಸ್ವ ಆವರ್ತಗಳು ರೂಪುಗೊಳ್ಳುತ್ತವೆ. ಓ ಚಿಪ್ಪಿನಲ್ಲಿ ಎರಡು ಎಲೆಕ್ಟ್ರಾನ್‍ಗಳು ತುಂಬಿಕೊಂಡುದರಿಂದ ಉಂಟಾದ ಧಾತುಗಳು ಪೊಟ್ಯಾಸಿಯಂ ಮತ್ತು ಕ್ಯಾಲ್ಸಿಯಂಗಳು. ಆದುದರಿಂದಲೇ ಈ ಎರಡು ಧಾತುಗಳು ಅದೇ ಬಗೆಯ ಎಲೆಕ್ಟ್ರಾನ್ ವಿನ್ಯಾಸವಿರುವ ಮೇಲಿನ ಸೋಡಿಯಂ ಮತ್ತು ಮೆಗ್ನೀಸಿಯಂಗಳನ್ನು ಹೋಲುತ್ತವೆ. ಅಲ್ಲಿಂದ ಮುಂದೆ ಅಸಂಪೂರ್ಣವಾಗಿರುವ ಒ ಚಿಪ್ಪನ್ನು ಭರ್ತಿಮಾಡುವುದರಿಂದ ಉಂಟಾದ ಧಾತುಗಳು ಹತ್ತು. ಸ್ಕ್ಯಾಂಡಿಯಂನಿಂದ (Sಛಿ) ಸತುವಿನ (Zಟಿ) ವರೆಗೆ, ಅಲ್ಲಿಂದ ಪುನಃ ಓ ಚಿಪ್ಪಿಗೆ ಎಲೆಕ್ಟ್ರಾನ್‍ಗಳು ತುಂಬಿಕೊಳ್ಳಲು ಪ್ರಾರಂಭಿಸಿ ಗ್ಯಾಲಿಯಂನಿಂದ (ಉಚಿ) ಕ್ರಿಪ್ಟಾನ್ (ಏಡಿ) ವರೆಗಿನ ಆರು ಧಾತುಗಳು ಉಂಟಾಗುತ್ತವೆ. ಈ ಆರು ಧಾತುಗಳ ಎಲೆಕ್ಟ್ರಾನ್ ವಿನ್ಯಾಸಗಳು ಆಯಾ ಗುಂಪಿನ ಮೇಲುಗಡೆ ಇರುವ ಅಗ್ರಧಾತುಗಳ ಎಲೆಕ್ಟ್ರಾನ್ ವಿನ್ಯಾಸಗಳಂತೆಯೇ ಇರುವುದರಿಂದ ಅವು ಆಯಾ ಅಗ್ರಧಾತುಗಳನ್ನು ಹೋಲುತ್ತವೆ. ಮುಂದಿನ ದೀರ್ಘ ಆವರ್ತಗಳಿಗೂ ಇದೇ ವಾದಸರಣಿ ಅನ್ವಯವಾಗುತ್ತದೆ. 

	ಎಲೆಕ್ಟ್ರಾನ್ ವಿನ್ಯಾಸದ ದೃಷ್ಟಿಯಲ್ಲಿ ವಿರಳಭಸ್ಮಧಾತುಗಳ ಸ್ಥಾನಕ್ಕೂ ಸಮರ್ಪಕ ಸಮಾಧಾನ ದೊರೆಯುತ್ತದೆ. ಲ್ಯಾಂಥನಂಗೆ ಬರುವ ವೇಳೆಗೆ ಎಲೆಕ್ಟ್ರಾನುಗಳು P ಚಿಪ್ಪನ್ನು ತುಂಬಲು ಪ್ರಾರಂಭಿಸಿದ್ದರೂ ಓ ಚಿಪ್ಪು ಇನ್ನೂ ಅಸಂಪೂರ್ಣವಾಗಿದ್ದು ಅದರಲ್ಲಿ ಇನ್ನೂ ಹದಿನಾಲ್ಕು ಎಲೆಕ್ಟ್ರಾನುಗಳಿಗೆ ಆಸ್ಪದವಿರುತ್ತದೆ. ಓ ಚಿಪ್ಪಿನಲ್ಲಿ ಈ ಹದಿನಾಲ್ಕು ಎಲೆಕ್ಟ್ರಾನುಗಳು ತುಂಬಿಕೊಳ್ಳುವಾಗ ವಿರಳಭಸ್ಮ ಧಾತುಗಳು ಉಂಟಾಗುತ್ತವೆ. ಆದ್ದರಿಂದ ಲ್ಯಾಂಥನಮನ್ನು ಅನುಸರಿಸಿ ಬರುವ ಈ ಹದಿನಾಲ್ಕು ಧಾತುಗಳಲ್ಲಿ ಔ ಮತ್ತು P ಚಿಪ್ಪುಗಳೆರಡರಲ್ಲೂ ಎಲೆಕ್ಟ್ರಾನ್ ವಿನ್ಯಾಸ ಏನೂ ಬದಲಾಗದೆ ಹಾಗೇ ಉಳಿದಿರುತ್ತದೆ. ಸಹಜವಾಗಿಯೇ ಅವುಗಳ ರಾಸಾಯನಿಕ ಗುಣಲಕ್ಷಣಗಳಲ್ಲಿ ಕಂಡುಬರುವ ವ್ಯತ್ಯಾಸ ಅತ್ಯಂತ ಕಡಿಮೆ.

	ಧಾತುಗಳ ಪರಮಾಣುಗಳಲ್ಲಿಯ ಎಲೆಕ್ಟ್ರಾನ್ ವಿನ್ಯಾಸಗಳು ಆವರ್ತಕೋಷ್ಟಕಕ್ಕೆ ಬುನಾದಿ ಎಂಬುದು ಸ್ಪಷ್ಟವಾಗದಮೇಲೆ ನೀಲ್ಸ್ ಬೋರ್ ಮತ್ತು ಜೆ. ಜೆ. ಥಾಮ್ಸನ್‍ರವರು ಎಲೆಕ್ಟ್ರಾನ್ ವಿನ್ಯಾಸಗಳ ಆಧಾರದಮೇಲೆ ರಚಿಸಿದ ಬೇರೊಂದು ಮಾದರಿಯ ಆವರ್ತಕೋಷ್ಟಕವನ್ನು ಪ್ರಕಟಿಸಿದರು (ಚಿತ್ರ 3). ಇದರಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶಗಳು : ಅಸಂಪೂರ್ಣ ಒಳಚಿಪ್ಪುಗಳನ್ನು ಎಲೆಕ್ಟ್ರಾನ್‍ಗಳು ತುಂಬಿಕೊಳ್ಳುವುದರಿಂದ ಉಂಟಾದ ಧಾತುಗಳನ್ನು ಚೌಕಟ್ಟಿನಲ್ಲಿ ಸೇರಿಸಿದೆ ; ಚಿ, b ಉಪಗುಂಪುಗಳಿಗೆ ಹೆಚ್ಚು ಪ್ರಾಶಸ್ತ್ಯ ಕೊಟ್ಟಿಲ್ಲ. 

	ಬೋರ್-ಥಾಮ್ಸನ್ ಮಾದರಿಯನ್ನು ಈ ರೀತಿ ಪಿರಮಿಡ್ ಆಕಾರದಲ್ಲಿ ಬರೆಯದೆ ಅಗಲವಾಗಿ ಹರಿ ಬರೆದಿರುವ ಒಂದು ಮಾದರಿ ಕೋಷ್ಟಕ ಈಗ ಹೆಚ್ಚು ಜನಪ್ರಿಯವಾಗಿದೆ (ಚಿತ್ರ 4). ಇವನ್ನು ವಿಸ್ತøತ ಕೋಷ್ಟಕವೆಂದೂ (ಲಾಂಗ್ ಟೇಬಲ್) ಹಳೆಯ ಮೆಂಡಿಲೀಫ್ ಕೋಷ್ಟಕವನ್ನು ಹ್ರಸ್ವ ಕೋಷ್ಟಕವೆಂದೂ (ಷಾರ್ಟ್ ಟೇಬಲ್) ಕರೆಯುವುದುಂಟು. ಈ ಕೋಷ್ಟಕದಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶಗಳು ಎರಡು. ಮೊದಲನೆಯದಾಗಿ ಮೂರರಿಂದ ಏಳನೆಯ ಗುಂಪಿನವರೆಗೆ ಹ್ರಸ್ವ ಆವರ್ತಗಳಲ್ಲಿ ಬರುವ ಅಗ್ರಧಾತುಗಳು ಎಲೆಕ್ಟ್ರಾನ್ ವಿನ್ಯಾಸದಲ್ಲಿ ಮತ್ತು ರಾಸಾಯನಿಕ ಗುಣಲಕ್ಷಣಗಳಲ್ಲಿ ಬಲಗಡೆಯ ಶಾಖೆಗಳನ್ನು ಹೋಲುವುದರಿಂದ ಅವುಗಳನ್ನು ಚಿ,b ಉಪಗುಂಪುಗಳೆಂದು ನಿರ್ದೇಶಿಸಿದ್ದಾರೆ. ಆದ್ದರಿಂದ ಈ ಐದು ಗುಂಪುಗಳಲ್ಲಿ ಚಿ, b ಉಪಗುಂಪುಗಳು ಮೆಂಡಿಲೀಫ್ ಕೋಷ್ಟಕದಲ್ಲಿದ್ದುದಕ್ಕೆ ಅದುಲುಬದಲಾಗಿವೆ. 

	ಎರಡನೆಯದಾಗಿ ಲ್ಯಾಂಥನಂ ಅನುಸರಿಸಿ ಬರುವ ಹದಿನಾಲ್ಕು ಧಾತುಗಳನ್ನು ಲ್ಯಾಂಥನಂ ಶ್ರೇಣಿ ಎಂದು ಕರೆದು ಕೋಷ್ಟಕದ ಹೊರಗಡೆ ಎತ್ತಿಡಲಾಗಿದೆ. ಅಂತೆಯೇ ಕೊನೆಯ ಆವರ್ತದಲ್ಲಿ ಆಕ್ವೀನಿಯಂ ತರುವಾಯ ಬರುವ ಥೋರಿಯಂ, ಪ್ರೊಟೊ ಆಕ್ಟೀನಿಯಂ, ಯುರೇನಿಯಂ ಮತ್ತು ಯುರೇನಿಯಂ ಆಚೆಯ ಧಾತುಗಳನ್ನೂ ಒಟ್ಟುಗೂಡಿಸಿ ಈ ಆಕ್ವೀನಿಯಂ ಶ್ರೇಣಿ ಲ್ಯಾಂಥನಂ ಶ್ರೇಣಿಗೆ ಜವಾಬಾಗಿ (ಕರೆಸ್‍ಪಾಂಡಿಂಗ್) ಬರುವ ಇನ್ನೊಂದು ಶ್ರೇಣಿಯೆಂದು ಗುರುತಿಸಿ ಇದನ್ನೂ ಕೋಷ್ಟಕದ ಹೊರಗಡೆ ಎತ್ತಿಡಲಾಗಿದೆ. 		  									
  (ಜೆ.ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ